ಆದಿತ್ಯವಾರ ಯಾಕೋ ಗುಡ್ಡ ಹತ್ತಿ ಇಳಿಯುವ ಮನಸ್ಸಾಗಿ ಸೀದಾ ಮನೆಯ ಹಿಂದಿನ ಗುಡ್ಡ ಏರಿದ್ದೆ. ಹಾಗೇ ಅಡ್ಡಾಡಿ ಮನೆಯ ಹತ್ತಿರ ಇಳಿದು ಬರುವಷ್ಟರಲ್ಲಿ ಪಕ್ಕನೆ ತಲೆ ಮೇಲಿಂದ ಏನೋ ಹಕ್ಕಿ ಹಾರಿದಂತಾಯಿತು. ಅರರೆ ಏನು ಆಶ್ಚರ್ಯ...! ಇದು ಹಕ್ಕಿ ಅಲ್ಲ ಆದ್ರೂ ಹಾರುತ್ತೆ.... ಹೊಸ್ದು.. ಅಂದುಕೊಂಡೆ. ಹಾರಿದ ಜೀವಿ ಅಲ್ಲೇ ಸಣ್ಣ ಗಿಡದ ಮೇಲೆ ಬಂದು ಕೂತಿತ್ತು. ಮತ್ತೆ ಸೂಕ್ಷವಾಗಿ ನೋಡಿದರೆ ಅದೊಂದು ಹಲ್ಲಿ, ರೆಕ್ಕೆಗಳಿವೆ, ಇದೋನೋ ಸ್ಪೆಷಲ್ಲಿರಬೇಕು ನಾನೇ ಕಂಡುಹುಡುಕಿದ್ದು ಎಂದು ಯುರೇಕಾ.... ಎಂದು ಕೂಗುವ ಮನಸ್ಸಾಯಿತು. ಮರದ ತೊಗಟೆಯ ಬಣ್ಣವಿತ್ತು. ಪಕ್ಕನೆ ಕಾಣಿಸಲಾರದು. ಅದಕ್ಕೆ ಪ್ರಕೃತಿಯೇ ಕೊಟ್ಟ ರಕ್ಷಣೆ ಇರಬಹಹುದು. ಸಣ್ಣ ಎರಡು ರೆಕ್ಕೆಗಳು, ಉಳಿದಂತೆ ಥೇಟ್ ಹಲ್ಲಿಯೇ... ಒಮ್ಮೆ ಹಿಡಿಯುದು ವೀಕ್ಷಿಸುವ ಮನಸ್ಸಾಯಿತು. ಬೈರಾಸು ತೆಗೆದು ಕಾಯರ್ಾಚರಣೆ ಶುರುವಾಗುವಷ್ಟರಲ್ಲಿ ಅದು ಇನ್ನೊಂದು ಕಡೆಗೆ, ಸುಮಾರು ಹತ್ತು ಮೀಟರ್ ದೂರಕ್ಕೆ ಹಾರಿತ್ತು... ಆದರೂ ಮನಸ್ಸು ಕೇಳಲಿಲ್ಲ, ಅಲ್ಲಿಗೆ ಹೋಗಿ ಪ್ರಯತ್ನಿಸಿದೆ, ಈ ಬಾರಿ ಹಾರಿ ದೊಡ್ಡ ಮರದಲ್ಲಿ ಕೂತಿತ್ತು. ನಿರಾಸೆ ಆಯಿತು. ಆದರೆ ಅದರ ದೇಹ ರಚನೆ ಆಶ್ಚರ್ಯ ತಂದಿತ್ತು. ಅದರ ಬಗ್ಗೆ ಇನ್ನು ಇಂಟನರ್ೆಟ್ಟಿನಲ್ಲಿ ಚಿತ್ರ, ಮಾಹಿತಿ ಹುಡುಕುವ ಕೆಲಸ ಬಾಕಿ ಇದೆ. ತೇಜಸ್ವಿಯವರು ಹಾರುವ ಓತಿ ಎಂಬಂತೆ ಕಾದಂಬರಿ ಬರೆದರೆ, ನನಗೆ ಸಣ್ಣ ಕಥೆ ಬರೆದರೆ ಹೇಗೆ? ಎಂಬ ಮನಸ್ಸಾಗಿದೆ. ಯಾಕೋ ಈಗೀಗ ಇಂಥ ಖಾಯಿಲೆಗಳೆಲ್ಲ ಬಂದು ಅಂಟಿಕೊಳ್ಳುತ್ತಿದೆ.!
9 ಕಾಮೆಂಟ್‌ಗಳು:
edde aatundu. last vaakya super...
Tumba chennagide...
nanu tejswi baradalli haruva halli nodidini, tapidare namma rabber kadinalli haruvqa manga nodidini aste
chennagide.........
tejaswi kate odida hagaytu........
hakki haridaga........ haritu manasu kudaa....... endu konde .. aadare......... adu hakkiyalla..................... aadaru nimma notakke sikkitu........ nijvaglu adbhuta.
bhava..havyaka bhasheli baidange keluttu....good mwork..keep it up....
baari chennagide
channagittu, nimma story vishwa tulu sammelanadha ondu hosa nenapannu thandu kotithu.
swathi atlar
prajavani
kate bareerri..
nim blog mastagide..!
ಕಾಮೆಂಟ್ ಪೋಸ್ಟ್ ಮಾಡಿ